ಉತ್ತರ ಕರ್ನಾಟಕದಲ್ಲಿ ಮೋಡಬಿತ್ತನೆಗೆ ಚಿಂತನೆ : ಕೃಷ್ಣ ಬೈರೇಗೌಡ

ವಿಧಾನಸಭೆ: ಮಳೆ ಕೊರತೆ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಮೋಡ ಬಿತ್ತನೆ ಮಾಡುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಕೃಷಿ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.

“ಜೆಡಿಎಸ್‌ನ ಕೋನರೆಡ್ಡಿ ಪ್ರಸ್ತಾಪಕ್ಕೆ ಉತ್ತರಿಸಿದ ಅವರು, ಈ ಹಿಂದೆಯೂ ರಾಜ್ಯದಲ್ಲಿ ಮೋಡಬಿತ್ತನೆ ನಡೆಸಿದ್ದು ಸಕಾರಾತ್ಮಕ ಫ‌ಲಿತಾಂಶ ದೊರೆತಿದೆ. ಈ ವರ್ಷವೂ ಅಗತ್ಯ ಬಿದ್ದರೆ ಮೋಡಬಿತ್ತನೆ ಮಾಡುವ ಬಗ್ಗೆ ಮುಖ್ಯಮಂತ್ರಿಯವರು ಸಹ ಸೂಚನೆ ನೀಡಿದ್ದಾರೆ. ಮುಂದಿನ ವಾರ ಸಂಪುಟ ಉಪ ಸಮಿತಿ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ಮೋಡ ಬಿತ್ತನೆ ಮಾಡಲು ವಿದೇಶದಿಂದ ಯಂತ್ರೋಪಕರಣ ತರಿಸಬೇಕು. ಜತೆಗೆ ನಾಗರಿಕ ವಿಮಾನಯಾನ ಸಚಿವಾಲಯದ ಅನುಮತಿಯನ್ನೂ ಪಡೆಯಬೇಕು. ಹೀಗಾಗಿ, ಇಲ್ಲಿ ಅಗತ್ಯ ವ್ಯವಸ್ಥೆ ಇದೆಯೇ ಎಂಬುದರ ಬಗ್ಗೆಯೂ ನೋಡಬೇಕಾಗುತ್ತದೆ ಎಂದರು.

ರಾಜ್ಯದಲ್ಲಿ ನೈಋತ್ಯ ಮಾರುತದಿಂದ ಜೂನ್‌ 1 ರಿಂದ ಜುಲೈ 23 ರವರಗೆ ವಾಡಿಕೆ ಮಳೆ 405.10 ಮಿ.ಮೀ. ಬೀಳಬೇಕಿದ್ದು 315.61 ಮಿ.ಮೀ. ಬಿದ್ದಿದೆ. ಸಾಮಾನ್ಯಕ್ಕಿಂತ ಸೇ.22 ರಷ್ಟು ಕಡಿಮೆ ಮಳೆ ಆಗಿದೆ. ಪ್ರಮುಖವಾಗಿ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಶೇ.41 ಕ್ಕಿಂತ ಕಡಿಮೆಯಿದೆ. ಆ ಭಾಗದಲ್ಲಿ ಮುಂಗಾರಿನಲ್ಲಿ 41.75 ಲಕ್ಷ ಹೆಕ್ಟೇರ್‌ ಬಿತ್ತನೆ ಮಾಡುವ ಗುರಿ ಇದ್ದರೂ ಇದುವರೆಗೂ 22.15 ಲಕ್ಷ ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿದೆ ಎಂದು ವಿವರಿಸಿದರು.
Read more at http://www.udayavani.com/kannada/news/%E0%B2%B0%E0%B2%BE%E0%B2%9C%E0%B3%8D%E0%B2%AF/85312/5-%E0%B2%89%E0%B2%A4%E0%B3%8D%E0%B2%A4%E0%B2%B0-%E0%B2%95%E0%B2%B0%E0%B3%8D%E0%B2%A8%E0%B2%BE%E0%B2%9F%E0%B2%95%E0%B2%A6%E0%B2%B2%E0%B3%8D%E0%B2%B2%E0%B2%BF-%E0%B2%AE%E0%B3%8B%E0%B2%A1%E0%B2%AC%E0%B2%BF%E0%B2%A4%E0%B3%8D%E0%B2%A4%E0%B2%A8%E0%B3%86%E0%B2%97%E0%B3%86-%E0%B2%9A%E0%B2%BF%E0%B2%82%E0%B2%A4%E0%B2%A8%E0%B3%86-%E0%B2%95%E0%B3%83%E0%B2%B7%E0%B3%8D%E0%B2%A3-%E0%B2%AC%E0%B3%88%E0%B2%B0%E0%B3%87%E0%B2%97%E0%B3%8C%E0%B2%A1